
ಈ ಬ್ಲಾಗ್ಲೇಖನವು ನಮ್ಮ ದೇಶದ ಏಕತೆ/ಒಕ್ಕಟ್ಟೆಂಬ ವಿಷಯವಾಗಿ ನನ್ನಭಿಪ್ರಾಯ ಮಂಡನೆಗೆ ಬರೆದ ಬರಹವೇ ಹೊರತು, ಯಾವ ತೀರ್ಮಾನವಲ್ಲ. ಇದರಲ್ಲಿ ತಪ್ಪುಗಳಿರುವವಕಾಶಗಳನ್ನೊಪ್ಪಿಕೊಳ್ಳುತ್ತೇನೆ.
ಸ್ವಾಭಾವಿಕ ದೇಶೀಯ ಚಿಂತನೆ/ರಾಷ್ಟ್ರೀಯ ಚಿಂತನೆ/ ರಾಷ್ಟ್ರವೆಂಬ ಪರಿಕಲ್ಪನೆಯ ಹುಟ್ಟು
ಸ್ವಾಭಾವಿಕ ರಾಷ್ಟ್ರೀಯತೆಯ ಚಿಂತನೆಗೆ ನಮ್ಮ ಕವಿರಾಜಮಾರ್ಗವೇ ದೊಡ್ಡುದಾರಣೆ.(ಶೆಲ್ಡನ್ ಪೋಲಾಕರ ಕರಾಮಾ ಬಗ್ಗಿನ ಟಿಪ್ಪಣಿ ನೋಡಿ. ದೇಶೀಯ/ರಾಷ್ಟ್ರೀಯ ಚಿಂತನೆ ಮಾಡಿದ ಮೊದಲ ಜನಾಂಗದ ಕನ್ನಡಿಗರು)
ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್
ಭಾವಿಸಿದ ಜನಪದಂ ವಸುಧಾ ವಲಯ ವಿಲೀನ ವಿಶದ ವಿಷಯ ವಿಶೇಷಂ
ಈ ಕವಿರಾಜಮಾರ್ಗದುದ್ಧೃತದಲ್ಲಿ ಗಮನಿಸಬೇಕಾದ ಪದಗಳು ’ಭಾವಿಸಿದ, ವಸುಧಾವಲಯ,ಜನಪದ’
ಭಾವಿಸಿದ = ಕನ್ನಡವೆಂಬ ಭಾವನೆ,ರಾಷ್ಟ್ರೀಯತೆ, ದೇಶೀಯತೆ,ಜನಾಂಗ ಚಿಂತನೆ, ಇಲ್ಲಿ ಒಂದು ಸಮೂಹವನ್ನು ಗುರುತಿಸುವ ಮತ್ತು ಒಕ್ಕಟ್ಟಿದ್ದು ಕನ್ನಡವೆಂಬ ಭಾವನೆ.
ವಸುಧಾವಲಯ = ವಸುಧೆ(ಭೂಮಿ), ವಲಯ(region,ಬಳೆ,boundary)
ಜನಪದ = ಜನಾಂಗ, ಬುಡಕಟ್ಟು
ಕಾವೇರಿಯಿಂದ ಗೋದಾವರಿ ವರೆಗೂ ಕನ್ನಡವೆಂಬ ಬುಡಕಟ್ಟಿನ (ಭೂ)ವಲಯವೆಂದ ಭಾವಿಸಿದ್ದರು.
ಇದು ಸ್ವಾಭಾವಿಕ (ಸಹಜ) ರಾಷ್ಟ್ರೀಯತೆ ಚಿಂತನೆ ethnic nationalismಗೆ ಉದಾಹರಣೆ.
ಯಾವಾಗಲೂ ವೊಂದೇ ಬಗೆಯ ಜನ(ಜನಾಂಗ) ತನ್ನ ಗುರುತುಗಳ ಸಲುವಾಗಿ ರಾಷ್ಟ್ರೀಯತೆಯನ್ನು ದೇಶೀಯ ಚಿಂತನೆ ಪರಿಕಲ್ಪನೆಗಳನ್ನು ಸ್ವಾಭಾವಿಕವಾಗಿಯೇ ಹೊಂದಿರುತ್ತದೆ.
ಸ್ವಾಭಾವಿಕ ಸಹಜ ರಾಷ್ಟ್ರ ಚಿಂತನೆ ಬರುವುದೇ ಒಂದು ಜನಾಂಗದ ಗುರುತಿಗಾಗಿ, ಒಂದು ಜನಾಂಗದ ನೇಟಿವಿಟಿಗಾಗಿ. ಸಾಮಾನ್ಯವಾಗಿ ಜನಾಂಗವನ್ನವರ ನುಡಿಯಿಂದ ಗುರುತಿಸಬಹುದು.
ಜಗತ್ತಿನ ಮುಂದುವರಿದ ಬಹುತೇಕ ರಾಷ್ಟ್ರಗಳಲ್ಲೂ ರಾಷ್ಟ್ರೀಯತೆಯೆಂಬುದು ಜನಾಂಗೀಯ ಮತ್ತು ಭಾಷಾಧಾರಿತ. ಅಮೆರಿಕವೊಂದೇ ಹಾಗೆ ನೋಡಿದ ಹಲಜನಾಂಗಗಳಿದ್ದೂ ಮುಂದುವರಿದ ದೇಶ. ಆದರೆ ಅಲ್ಲೂ ಪೆಡರಲ್ ವ್ಯವಸ್ಥೆಯಿದ್ದೂ ಪ್ರತಿಯೊಂದು ರಾಜ್ಯಕ್ಕೂ ತಕ್ಕಮಟ್ಟಿನ ಸ್ವಾಡಳಿತವಿದೆಯಂತೆ.
ಜಗತ್ತಿನಲ್ಲಿ ವಿಫಲವಾದ ದೇಶಗಳಲ್ಲಿ ಬಹುತೇಕವೂ ಹಲಜನಾಂಗವನ್ನು(Multiethnic) ಹೊಂದಿವೆ/ಹೊಂದಿದ್ದವು. ಉದಾಹರಣೆ ಇರಾಕ್, ಯುಗಾಸ್ಲೋವಿಯ, ಹಳೆಪಾಕಿಸ್ತಾನ( ಬಾಂಗ್ಲಾದೇಶದ ವಿಭಜನಾ ಪೂರ್ವ ), ಸ್ವೀಡನ್ನು(ಸ್ಕಾಡಿನೇವಿಯ), USSR ಹೀಗೆ.
ಆದರೆ ಒಂದೇ ಪ್ರಧಾನ ಜನಾಂಗವಿರುವ ಇಂಗ್ಲೆಂಡು, ಪ್ರಾಂಸು, ಜರ್ಮನಿ, ಜಪಾನು,ರಷ್ಯ,ಸ್ವೀಡನ್(ಈಗಿನ), ಪಿನ್ಲೆಂಡು, ನೋರ್ವೆ, ಸ್ಪೇನು(ಇಲ್ಲೂ ಪ್ರತ್ಯೇಕತೆಯ ಕೂಗಿದೆ) ಇವೆಲ್ಲ ಮುಂದುವರಿದ ದೇಶಗಳೇ. ಗ್ರೇಟ್ ಬ್ರಿಟನ್ನಲ್ಲೂ ಇಂಗ್ಲೆಂಡು, ಸ್ಕಾಟ್ಲೆಂಡು,ವೇಲ್ಸ ಮುಂತಾದ ದೇಶಗಳು ಜನಾಂಗಾಧಾರಿತವಾಗೇ ಯಾಗಿರುವುವು.
ನಮ್ಮ ದೇಶದೀ ಯಳ್ಳಕ ವ್ಯವಸ್ಥೆಗೆ ನಮ್ಮ ದೇಶದಲ್ಲಿರುವ ಹಲಜನಾಂಗಗಳ ನಡುವಣವಿಲ್ಲದ ಹೊಂದಾಣಿಕೆ, ಸಾಮರಸ್ಯವೇ ಕಾರಣ. ಹೊಂದಾಣಿಕೆಯಿಲ್ಲದಿರುವುದುಕ್ಕೆ ನುಡಿ/ಭಾಷೇ ಮತ್ತು ನಡೆಗಳು ಬೇರೆ ಬೇರೆಯಾಗಿರುವುದೇ ಪ್ರಧಾನ ಕಾರಣಗಳು. ನಮ್ಮಲ್ಲಿ ಪರಸ್ಪರರೊಡಂಬಡಿಕೆಗೆ ಸಂವಹನೆಗೆ ತೊಡಕೀ ಹಲನುಡಿಗಳು ಮತ್ತು ಹಲಜನಾಂಗಗಳು. ಇದೇ ನಮ್ಮ ದುರ್ಬಲೈಕತೆಗೆ ಕಾರಣ ಕೂಡ.
ಹಲವು ನುಡಿಗಳನ್ನಾಡುವ ಯಾವುದೇ ದೇಶದ ಜನರೆಂದೂ ವೊಂದೇ ನುಡಿಯನ್ನಾಡುವ ದೇಶದ ಜನರಷ್ಟು ಒಕ್ಕಟ್ಟಿನಲ್ಲಿರಲು ಸಾಧ್ಯವೇ ಯಿಲ್ಲ.
ಇರಬೇಕೆಂದು ಯಾರು ಯಾರು ಕರೆನೀಡಿ ಬೇಡಿಕೊಂಡರೂ ಅದು ಸಂಭವವಿಲ್ಲ…. ( ಇದು ಮನುಷ್ಯನ ಸಹಜ ವ್ಯವಸ್ಥೆ )
ಭಾರತ, ಇಂಡಿಯಯೆಂಬ ದೇಶವು ಸ್ವಾಭಾವಿಕ ಸಹಜವಾಗಾದುದಲ್ಲ. ಸಾಮಾನ್ಯ ದೇಶ ರಾಷ್ಟ್ರವೆಂಬ ಕಲ್ಪನೆಯೊಂದು ಜನಾಂಗ, ನುಡಿಯ ಜತೆ ಸೇರಿರುತ್ತದೆ.( ಸ್ವೀಡನ್, ಯುಗಾಸ್ಲೋವಿಯ, ರಷ್ಯ ದೇಶಗಳೊಡೆದುದನ್ನು ನೋಡಿರಿ ). ಹಲಜನಾಂಗೀಯ ದೇಶಗಳ ಭವಿಷ್ಯವು ಹೀಗೆಯೇ, ಒಡಕಿನದ್ದು!
ಮಾದರಿಯಾಗೊಂದು ಸನ್ನಿವೇಶ ಕಲ್ಪಿಸಿಕೊಳ್ಳೋಣ
ಇಂಗ್ಲೇಂಡಲ್ಲಿರುವ ಕೆಲಪ್ರೆಂಚರ ಮೇಲತ್ಯಾಚಾರವಾಯಿತೆಂದು ಬಹುಪ್ರೆಂಚರು ಇಂಗ್ಲೇಂಡಿನ ಮೇಲೆ ಸೇಡಿಟ್ಟುಕೊಳ್ಳುವುದು.ಈಗೊಂದು ವೇಳೆ ಇಂಗ್ಲೆಂಡಿನಲ್ಲಿ ಪ್ರೆಂಚರ ಸಂಖ್ಯೆಯು ಗಣನೀಯವಾಗಿದ್ದರೆ, ಫ್ರಾಂಸ್ದೇಶದ ಫ್ರೆಂಚರು ಮತ್ತು ಇಂಗ್ಲೆಂಡಿನ ಫ್ರೆಂಚರು ಸೇರಿಂಗ್ಲಿಶ್ ಮಂದಿಯ ಮೇಲೆ ದಾಳಿ ಮಾಡಬಹುದು, ಹಾಗೂ ಅದರಲ್ಲಿ ಯಶವನ್ನೂ ಕಾಣಬಹುದು.ಇಲ್ಲೀ ಬಹುಜನಾಂಗೀಯ ಇಂಗ್ಲೆಂಡಿಗೇ ಅಧಿಕಹಾನಿ ಹಾಗು ಬಹುಜನಾಂಗೀಯತೆಯನ್ನು ಹೆಚ್ಚು ನೆಲಕ್ಕಾಗೋ, ತಮ್ಮುದಾರತೆಯಿಂದಲೋ ವೊಪ್ಪಿಕೊಂಡ ಇಂಗ್ಲಿಶರಿಗೇ ಹೆಚ್ಚು ಹಾನಿ ಸಂಭವಿಸುವುದು. ಒಂದು ಜನಾಂಗದವರು ಮತ್ತೊಂದು ಜನಾಂಗದವರ ಮೇಲಾಡಳಿತವನ್ನು ನಡೆಸುವೆಲ್ಲಾ ವ್ಯವಸ್ಥೆಗಳೂ ತಾತ್ಕಾಲಿಕವಾದವು.
ಇದಕ್ಕೆ ಬಹುಸಂಖ್ಯಾತ ಇಂಗ್ಲಿಶರು ಅಲ್ಪಸಂಖ್ಯಾತ ಫ್ರೆಂಚರ ಮೇಲೆ ಇಂಗ್ಲೆಂಡಲ್ಲಿ ನಡೆಸಿದ ದಬ್ಬಾಳಿಕೆಯೂ ಕಾರಣವಿರಬಹುದು.
ಶ್ರಿಲಂಕೆಯ ತಮಿಳರು ಮತ್ತವರಿಗೆ ಭಾರತದ ತಮಿಳುನಾಡಿನ ಬೆಂಬಲವೂ ಯಿದಕ್ಕೆ ವಾಸ್ತವದುದಾಹರಣೆಯಾಗುವುದು. ಇಂದು ಪಾಕಿಸ್ತಾನದಲ್ಲಿ ನೆಲೆಸಿರುವ ಹಲವರು ಭಾರತದಿಂದ ವಲಸೆಯಾದವರೂ ಮತ್ತವರ ನೆಂಟರೂ ಯಿಷ್ಟರೂ ಭಾರತದಲ್ಲೇ ಯಿರುವುದನ್ನೂ ಗಮನಿಸಬೇಕು.
ಇತ್ತೀಚಿನ ಕಮೆಂಟುಗಳು