ಮಾಯ್ಸನ ಊಂಕಾಟ

Entries tagged as ‘ವಿರಹ’

ಉತ್ತುಂಗ ಪ್ರೇಮ – ಮುಗಿಯಲಿಲ್ಲ

January 30, 2009 · 1 Comment

ಮಾಯ್ಸ ಮತ್ತು ಗುರುಬಾಳಿಗರು ತಮ್ಮ ನೆಚ್ಚಿನ Robbie Williams ಎಂಬ British ಹಾಡುಗಾರನ Love Supreme ಎಂಬ ಹಾಡಿನ ನುಡಿಯನ್ನು ಕನ್ನಡಕ್ಕೆ ತರಲು ಹುರುಪಿನಿಂದ ತೊಡಗಿ, ಅದನ್ನು ಮುಗಿಸಲಿಲ್ಲ. ಆ ’ಉತ್ತುಂಗ ಪ್ರೇಮ’ದ ಅನುವಾದ ಕವನ ಕೊನೆಯ ನಾಲಕ್ಕು ಪ್ಯಾರಗಳು ಹಾಗೆ ಉಳಿದುಬಿಟ್ಟವು.

ಉತ್ತುಂಗ ಪ್ರೇಮ

Oh it seemed forever stopped today

All the lonely hearts in London

Caught a plane and flew away

And all the best women are married

All the handsome men are gay

You feel deprived

ಓ! ಕಾಲ ನಿಂತ್ ಬಿಟ್ ಹಾಗಿದ್ಯಲ್ಲ

ಲಂಡನ್ನಿನಾ ಒಂಟಿಹೃದಯಗಳೆಲ್ಲ

ಛೇ! ಪ್ಲೇನ್ ಹಿಡಿದ್ ಹಾರಿ ಹೋದವಲ್ಲ

ಉಳಿದ ಚೆಲುವೇರಲ್ಲಿ ಮದುವೆಯಾದೋರೇ ಎಲ್ಲ

ಮತ್ತೀ ಚಲುವ ಚನ್ನಿಗರು ಬರೀ ಗೇ-ಗಳೇ! ಸಲ್ಲ!

ಮಿಕ್ಕ ನೀನೊಬ್ಬ ಆಟಕ್ಕಿಲ್ಲ ಲೆಕ್ಕಕ್ಕೂ ಇಲ್ಲ

Yeah are you questioning your size?

Is there a tumour in your humour,

Are there bags under your eyes?

Do you leave dents where you sit,

Are you getting on a bit?

Will you survive

You must survive

ಹೋ! ನಿನ್ನನ್ನ ನೀನೇ ಅಳೆದ್‌ಕೊಳ್ತಿದ್ದೀಯ?

ನಿನಗೆ ನಗಲು ಬಿಗುವಾಗಿದೆಯಾ?

ನಿನ್ ಕಣ್ಣಾಲಿ ಕಪ್ಪಿಳಿದಿದೆಯಾ?

ನೀ ಕೂತ ಕಡೆ ದಗ್ಗಾಗಿದೆಯಾ?

ಕೂತಲ್ಲೇ ಮುದುಕನಾಗುವೆಯಾ?

ಹೀಗೆ ಅಳಿದ್ ಹೋಗುವೆಯಾ ನೀನು?

ಇಲ್ಲ, ಬದುಕುಳಿಯಲೇ ಬೇಕ್ ನೀನು

When there’s no love in town

This new century keeps bringing you down

All the places you have been

Trying to find a love supreme

A love supreme

ಈ ಊರಲ್ಲಿ ಒಲವಳಿದಾಗ

ಹೊಸಯುಗವು ನಿನ್ನ ಹಳಿದಾಗ

ಅಲೆದಲೆದೆ ಹಲನೆಲೆಗಳಲ್ಲಿ

ಬಸವಳಿದು ಅರಸಿದ ಆ ಉತ್ತುಂಗ ಪ್ರೇಮ

ಆ ಉತ್ತುಂಗ ಪ್ರೇಮ

Oh what are you really looking for?

Another partner in your life to

abuse and to adore?

Is it lovey dovey stuff,

Do you need a bit of rough?

Get on your knees

ಓ! ಹಂಬಲಿಸುವೆ  ಏನನ್ನ?

ಇನ್ನೊಂದು ಬಾಳಸಂಗಾತೀನ?

ತಬ್ಬಿ ನುಲಿದು ಮುದ್ದಾಡಲಾ?

ಓ ಆ ಲವ್ವು ಗಿವ್ವು ಅದಾ?

ತುಸು ಗಡುಸು ಬಿನ್ನಾಣದ್ದಾ?

ಹೊರು ಹರಕೆ ನೀ ಪೆದ್ದ!

Yeah turn down the love songs that you hear

‘Cause you can’t avoid the sentiment

That echoes in your ear

Saying love will stop the pain

Saying love will kill the fear

Do you believe

You must believe

ಹ! ಆ ಲವ್ ಹಾಡುಗಳನ್ನ ನಿಲ್ಸಿ ಬಿಡು

ಕಿವೀಲಿ ಸೆಲೆ ಹೊಡೆದು ಉಕ್ಕೋ

ಭಾವನೆಗಳನ್ನ ತಡೆಯಲಾರೆ ನೀನು

ಆ ಪ್ರೇಮ ನೋವನ್ನು ಅಳಿಸುವುದು

ಆ ಪ್ರೇಮ ಹೆದರಿಕೆಯ ಕಳಿಸುವುದು

ಎಂದು ನೀನ್ ನಂಬ್ತೀಯೇನ್ ಲೇ?

ಹಾ ನಂಬಲೇ ಬೇಕ್ ನೀನ್ ಕಾಣ್ಲೇ!

When there’s no love in town

This new century keeps bringing you down

All the places you have been

Trying to find a love supreme

A love supreme

ಈ ಊರಲ್ಲಿ ಒಲವಳಿದಾಗ

ಹೊಸಯುಗವು ನಿನ್ನ ಹಳಿದಾಗ

ಅಲೆದಲೆದೆ ಹಲನೆಲೆಗಳಲ್ಲಿ

ಬಸವಳಿದು ಅರಸಿದ ಆ ಉತ್ತುಂಗ ಪ್ರೇಮ

ಆ ಉತ್ತುಂಗ ಪ್ರೇಮ

I spy with my little eye

Something beginning with (ah)

Got my back up

And now she’s screaming

So I’ve got to turn the track up

Sit back and watch the royalties stack up

I know this girl she likes to switch teams

And I’m a fiend but I’m living for a love supreme

When there’s no love in town

This new century keeps bringing you down

All the places you have been

Trying to find a love supreme

A love supreme

Come and live a love supreme

Don’t let it get you down

Everybody lives for love

Come and live a love supreme

Don’t let it get you down

Everybody lives for love

ಮಿಕ್ಕವನ್ನು ಹುರುಪಿರುವವರು ಕನ್ನಡಕ್ಕೆ ತಂದು ಕಮೆಂಟೆಂದು ಹಾಕಿದರೆ ಇದಕ್ಕೆ ಮಾಯ್ಸ ಸೇರಿಸುತ್ತಾನೆ. ಅವರ ಹೆಸರನ್ನೂ ಜತೆಗೆ ಹಾಕ್ತಾನೆ. ಇಷ್ಟ ಇದ್ದೋರು ಮಾಡಿಬಹುದು. ಇಲ್ಲದೇ ಇದ್ರೇ ’ಉತ್ತುಂಗ ಪ್ರೇಮ’ ಪೂರ್ಣ ಎಂದೂ ಅಲ್ವ!

Categories: ಒಂಟಿ · ಒಲುಮೆ · ಗೆಳೆತನ · ಪ್ರೀತಿ · ಬದುಕು · ವಿರಹ · ಸ್ನೇಹ
Tagged: , , , , , ,

ಮೌನ ಎದೆ

January 23, 2009 · Leave a Comment


ಅಂದು ನೀ ಹೀಗೇ ನನ್ನ ಕಂಡಿದ್ದೆ
ಚಂದು ಹೊಂಗೊಂಬೆಯಂತೆ ಕೂತಿದ್ದೆ
ತಲೆಬಾಗಿ ಮೇಲ್ಗಣ್ಣಿಂದೆನ್ನ ನೋಡಿ
ನಾಚಿ ಹಾಗೇ ಸುಮ್ಮನೆ ನಸುನಕ್ಕಿದ್ದೆ

….. ನನ್ನ ಎದೆಯಲಿಂದು ಕೊನೆಗೆ ತಣ್ಣನೆ ಮೌನ!

ನಿನ್ನ ನೋಡಿ ನನ್ನೀ ಎದೆ ಹೇಳಿತ್ತು
ಇವಳೇ ಸಾವುಬದುಕಿನ ಜೊತೆಗಾತಿ
ನೀನು ನಿನ್ನ ಮನಸ್ಸಲ್ಲೆ ಹೂಂ ಎಂದೆ
ಅದಕ್ಕೆ ಒಂದಾದೆವು ನಾವು ಮುಂದೆ

…… ನನ್ನ ಎದೆಯಲಿಂದು ಕೊನೆಗೆ ತಣ್ಣನೆ ಮೌನ!

ಎನಿತ್ತೋ ರಸಗಳಿಗೆ ಕಳೆದಿತ್ತು
ಒಲುಮೆಯ ಚಿಲುಮೆ ಪುಟಿದಿತ್ತು
ಒನಪಿನ ಚೆಲುವು ತುಂಬಿತ್ತು
ಸೊಗಸಲಿ ಮುಳುಗಿತ್ತು ಹೊತ್ತು

….. ನನ್ನ ಎದೆಯಲಿಂದು ಕೊನೆಗೆ ತಣ್ಣನೆ ಮೌನ!

ಮರೆತು ಅಂದು ನೀನಿತ್ತ ಮಾತು
ತೊರೆದು ‌ಈ ಒಂಟಿ ನನ್ನ ಹೊರತು
ಎದೆಯ ಹಿಸುಕಿ ಇರಿದು ಕೊಂದು
ಪ್ರಾಣಪಕ್ಷಿಯಾಗಿ ಹಾರಿ ಹೋದೆ

…… ನನ್ನ ಎದೆಯಲಿಂದು ಕೊನೆಗೆ ತಣ್ಣನೆ ಮೌನ!

Categories: ಒಂಟಿ · ಒಲುಮೆ · ಪ್ರೀತಿ · ಬದುಕು · ವಿರಹ
Tagged: , , , ,

ಖಾಲಿ ಬಾಟಲಿ

January 23, 2009 · Leave a Comment


ಮರೆಯಾದ ಒಲುಮೆಯ
ಮರೆಯಲು ಕುಡಿದೆನಾ
ಸುರೆ ಬಾಟಲಿ ಎಷ್ಟೋ
ಸುರಿದೆ ಎತ್ತಿ ಅಪ್ಪಿಕೊಂಡು

……………..ಈ ಹಾಳು ಖಾಲಿ ಬಾಟಲಿ ||

ಕುಡಿದ ಗುಟುಕಿಳಿದು
ಮಿಡಿವುದು ನೆನೆಪು
ತುಣುಕು ತುಣುಕು
ಇಣುಕಿ ಜೀವಹಿಂಡಿ

……………..ಈ ಹಾಳು ಖಾಲಿ ಬಾಟಲಿ ||

ಮುಗಿದು ತೀರಿದ ಬಾಟಲಿ

ಪೂರ ಖಾಲಿ ಖಾಲಿಯಾಗಿ
ಅಣಕಿಸುವುದು ನನ್ನೀ
ತಿಣುಕು ಜೀವನವನು

……………..ಈ ಹಾಳು ಖಾಲಿ ಬಾಟಲಿ ||

ಹಾಳು ಖಾಲಿ ಬಾಟಲಿ
ಎಂದು ಎಸೆದದೊಗೆದರೆ
ಒಡೆದು ನುಚ್ಚುನೂರು
ನನ್ನ ಕನಸುಗಳ ಹಾಗೆ

……………..ಈ ಹಾಳು ಖಾಲಿ ಬಾಟಲಿ ||

Categories: ಒಂಟಿ · ಒಲುಮೆ · ಪ್ರೀತಿ · ಬದುಕು · ವಿರಹ
Tagged: , , , ,

ಹೊಗೆಯೆದೆ

January 22, 2009 · Leave a Comment


ವಿರಹದ ಸಿಗರೇಟಿನ
ಹೊಗೆಯೆನ್ನ ಎದೆತುಂಬ
ಸುಟ್ಟ ಗುಂಡಿಗೆಯಲ್ಲಿ
ನಿನ್ನ ಪ್ರೀತಿಯ ಬೂದಿ

ಕಣ್ಣೀರು ಹರಿಸುರಿದು
ತಣಿಸಲೆನ್ನ ಎದೆಗೆ ಬಿದ್ದು
ಭುಗಿಲೆಬ್ಬಿಸಿದೆ ಒಳಗಿನ
ನೆನೆಪಿನ ಉರಿಜ್ವಾಲೆ

ಒಮ್ಮೆ ಮರಳಿ ಬಾ, ಕಂಡು
ಕಣ್ತುಂಬ ನಿನ್ನ, ಕೊಟ್ಟು
ಹೋಗಿವೆ ನನ್ನೀ ಉಸಿರ
ಒಲುಮೆಯ ಬಳುವಳಿಯಾಗಿ

Categories: ಒಂಟಿ · ಒಲುಮೆ · ಪ್ರೀತಿ · ವಿರಹ
Tagged: , ,

ಕತ್ತಲ ಕನಸು

January 22, 2009 · Leave a Comment


ಆಹಾ! ಎಂತಹ ಕನಸು
ನಾನು ನೀನು ಇಬ್ಬರೇ
ಬೆಚ್ಚಗೆ ಮರದ ಕೆಳಗೆ
ಪಚ್ಚೆತಳಿರ ನೆಳಲೊಳಗೆ

ಆಹಾ! ಆ ತಂಗಾಳಿಗೆ
ಹಾರುವ ನಿನ್ನಾ ಕೂದಲು
ಮುಂಗುರುಳು ಹಾಗು
ನನ್ನಾ ತೇಲುವ ಮನಸ್ಸು

ಆಹಾ! ನಿನ್ನಾ ಸವಿನುಡಿಗೆ
ತುಡಿದು ಮಿಡಿದ
ತುಂಬುಒಲುಮೆಯ
ನನ್ನೀ ಪುಟ್ಟಎದೆ

ಹಾ ಹ! ಕನಸು ಬರೀ ಅದು
ಹುಸಿ ಹಗಲುಗನಸು
ಈ ತಣ್ಣನೆಯ ಕಗ್ಗತ್ತಲ
ಒಂಟಿ ಕೋಣೆಯಲ್ಲಿ !

Categories: ಒಂಟಿ · ಒಲುಮೆ · ಪ್ರೀತಿ · ವಿರಹ
Tagged: , , ,